MrBeast Net Worth | ಮಿಸ್ಟರ್ ಬೀಸ್ಟ್ Reaches $1 Billion: The World’s Youngest Billionaire Under 30

ಮಿಸ್ಟರ್ಬೀಸ್ಟ್ (MrBeast) ಎಂಬ ಹೆಸರಿನಿಂದ ಪ್ರಸಿದ್ಧನಾದ ಜಿಮ್ಮಿ ಡೊನಾಲ್ಡ್ಸನ್ ಈಗ ಅಧಿಕೃತವಾಗಿ $1 ಬಿಲಿಯನ್ (₹8,350 ಕೋಟಿ) ಮೌಲ್ಯದ ಸ್ವಾಮಿಯಾಗಿ ಶತಕೋಟಿಪತಿಗಳ ಕ್ಲಬ್‌ಗೆ ಸೇರಿದ್ದಾರೆ.

2017ರಲ್ಲಿ ಒಂದು ವಿಚಿತ್ರವಾದ ಆದರೆ ಕುತೂಹಲಕಾರಿ ವಿಡಿಯೋ ಮೂಲಕ ಅವರು ಫೇಮ್ ಆಗಿದ್ದು “100,000 ಎಣಿಕೆ ಮಾಡುವ” ವಿಡಿಯೋದಿಂದ.

ಇದನ್ನು ಪೂರ್ಣಗೊಳಿಸಲು ಅವರಿಗೆ 44 ಗಂಟೆಗಳು ಬೇಕಾಯಿತು ಮತ್ತು ಇದಕ್ಕೆ 21 ಮಿಲಿಯನ್ ವೀಕ್ಷಣಗಳು ಲಭಿಸಿವೆ. ಇದಾದ ನಂತರ ಅವರ ಪ್ರಚಾರ ಗಗನಕ್ಕೇರಿತು.

ಮಿಸ್ಟರ್ಬೀಸ್ಟ್ (ಜಿಮ್ಮಿ ಡೊನಾಲ್ಡ್ಸನ್) 1998ರಲ್ಲಿ ನಾರ್ತ್ ಕರೋಲಿನಾದ ಗ್ರೀನ್ವಿಲ್ಲ್ ನಲ್ಲಿ ಜನಿಸಿದರು. ತಮ್ಮ 12ನೇ ವಯಸ್ಸಿನಲ್ಲಿ “MrBeast6000” ಎಂಬ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿದರು.

ಜಿಮ್ಮಿಯವರ ತಾಯಿ ಮನೆಮನೆಗಳಲ್ಲಿ ಕೆಲಸ ಮಾಡಿಕೊಂಡಿದ್ದವರು ಮತ್ತು ತಂದೆ ಖಾಸಗಿ ಉದ್ಯೋಗದಲ್ಲಿದ್ದರು. ಅವರ ಸಹೋದರ ಸಿ.ಜೆ. ಡೊನಾಲ್ಡ್ಸನ್ ಕೂಡ “MrBro” ಎಂಬ ಹೆಸರಿನಲ್ಲಿ ಯೂಟ್ಯೂಬರ್ ಆಗಿದ್ದಾರೆ.

ಇದರ ಜೊತೆಗೆ Beast Reacts, MrBeast Gaming, MrBeast Philanthropy ಮುಂತಾದ ಹಲವಾರು ಚಾನೆಲ್‌ಗಳೂ ಯಶಸ್ಸು ಕಂಡಿವೆ.

Celebrity Net Worth ಪ್ರಕಾರ, MrBeast ನ ದೈನಂದಿನ ಆಸ್ತಿ ಮೌಲ್ಯ $1 ಬಿಲಿಯನ್ (₹8,350 ಕೋಟಿ). 2023ರಲ್ಲಿ ಅವರ ಸಂಸ್ಥೆಗಳು Feastables (ಚಾಕೋಲೇಟ್ ಬ್ರ್ಯಾಂಡ್) ಮತ್ತು MrBeast Burgers $223 ಮಿಲಿಯನ್ ಆದಾಯವನ್ನು ಗಳಿಸಿದವು.